ಗಾದೆಗಳು

ವೇದ ಸುಳ್ಳಾದರು.. ಗಾದೆ ಸುಳ್ಳಾಗದು!!

ಗಾದೆಗಳು ಜೀವನ ಅನುಭವದಿಂದ ಬರುವ ಮಾತುಗಳು!  ಗಾದೆಗಳು ಜನರ ದಿನ-ನಿತ್ಯದ ಬದುಕಿನಲ್ಲಿ ಬಳಸುವಂತಹ ನಯವಾದ ಮತ್ತು ಚೂಪಾದ ಮಾತುಗಳು.

  1. ಕಳ್ಳನ ನಂಬಿದರು ಕುಳ್ಳನ ನಂಬಬಾರದು !
  2. ಹಳೇ ಗಂಡನ ಪಾದವೇ ಗತಿ !
  3. ಒಲ್ಲದ (ಬೇಡದ) ಗಂಡನಿಗೆ ಮೊಸರಲ್ಲಿ ಕಲ್ಲಿತ್ತಂತೆ !
  4. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ !
  5. ಗಂಡ-ಹೆಂಡತಿ ಜಗಳಲದಲ್ಲಿ ಕೂಸು ಬಡವಾಯ್ತು !
  6. ಕಳ್ಳನಿಗೊಂದು ಪಿಳ್ಳೆ ನೆಪ (ನೆವ) !
  7. ತಾನು ಕಳ್ಳ ಪರರ ನಂಬ !
  8. ಕಬ್ಬು ಡೊಂಕಾದ್ರು ಸಿಹಿಯಾಗಿರುತ್ತೆ !
  9. ಹಾವು ಎಷ್ಟೇ ವಯಸ್ಸಾದರೂ ವಿಷ ಹಳೇದಲ್ಲ !
  10. ಬಿಸಿ ಬಾಣಲೆ ಇಂದ ಬೆಂಕಿಗೆ !
  11. ಹಿರಿಯಕ್ಕನ ಚಾಳಿ ಮನೆ-ಮಂದಿಗೆಲ್ಲಾ !
  12. ಹುಲಿಗೆ ತನ್ನ ಕಾಡೇನು ಪರರ ಕಾಡೇನು?
  13. ಆಡು ಬೆಳೆದರೆ ಆನೆಯಾದೀತೇ?
  14. ಜಟ್ಟಿ ಬಿದ್ದರು ಮೀಸೆ ಮಣ್ಣಾಗಲ್ಲ !
  15. ಆನೆ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ !
  16. ರಾವಣಾಸುರನ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ! (ಸಾಕೇ?)
  17. ಆನೆ ಹೋದಲ್ಲೇ ದಾರಿ,ಶಟ್ಟಿ ಬಿಟ್ಟಲ್ಲೇ ಪಟ್ಟಣ !
  18. ಆಯ್ಕೊಂಡ್ ತಿನ್ನೋ ಕೋಳಿ ಕಾಲು ಮುರಿದ ಹಾಗೆ !
  19. ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
  20. ಅಳಿಲು ಏರಿದರೆ ಅರಳಿಮರ ಅಲ್ಲಾಡೇತೆ?
  21. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತಂತೆ !
  22. ಕೋಳಿ ಕೇಳಿ ಖಾರ ಅರೆಯಲ್ಲ !
  23. ತೋಳ ಹಳ್ಳಕ್ಕೆಬಿದ್ರೆ ಆಳಿಗೊಂದು ಕಲ್ಲು !
  24. ಮಾರಿಕಣ್ಣು ಹೋರಿಮೇಲೆ, ಕಟುಕನ ಕಣ್ಣು ಕುರಿ ಮೇಲೆ !
  25. ಉಪ್ಪು ತಿಂದವನು ನೀರು ಕುಡಿಯಲೇ ಬೇಕು !
  26. ಕೆರೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆನಾ ?
  27. ಕಳೆ ಇದ್ದಲ್ಲಿ ಬೆಳೆಇಲ್ಲ (ಕಳೇಇದ್ದಲ್ – ಬೆಳೆಇಲ್ಲ ) !
  28. ಕುಂಬಳ ಬಳ್ಳಿಗೆ ಕಾಯಿ ಭಾರವೇ ?
  29. ಬಡ ದೇವರ ಕಂಡರೆ ಬಿಲ್ಪತ್ರೆ ಕೂಡ ಬುಸ್ಸ್ ಎಂನ್ತಂತೆ!
  30. ಬಡವ ನೆಂಟನಲ್ಲ, ಬಾಳೇಕಾಯಿ ತರಕಾರಿಯಲ್ಲ !
  31. ಹೆಂಡ ಕುಡಿಯೋನ್ಗೆ ಯಾರ ಹಂಗು?
  32. ಅತ್ತೆಗೆ ಒಂದು  ಕಾಲ ಆದರೆ, ಸೊಸೆಗೂ ಒಂದು ಕಾಲ!
  33. ಕುರಿ ಕೊಬ್ಬಿದಷ್ಟು ಕುರುಬನಿಗೆ ಲಾಭ !
VN:F [1.9.22_1171]
Rating: 3.3/5 (9 votes cast)
ಗಾದೆಗಳು, 3.3 out of 5 based on 9 ratings

1 Comment


  1. // Reply

    ಗಾದೆ ಮಾತುಗಳು ತುಂಬಾ ಚೆನ್ನಾಗಿವೆ !

Leave a Reply