ಬಂಗಾರ ನೀರ ಕಡಲಾಚೆ

IMG_2922-bord

ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ
ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ
ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ
ಹರಿತದ ಭಾವ, ಬೇರಿತದ ಜೀವ ಅದರೊಳಗೆ ಒಳಗೆ ಒಳಗೆ

ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ್-ನಿಮ್ಮ ಆತ್ಮಗಳಿಗೆ

ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ  ತೀರ
ಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ
ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಹೈಯಾ ಹೈಯಾ ಹೈಯಾ ಹೈಯಾ ಹೊ

ಇದು ಉಪ್ಪುನೀರ ಕಡಲಲ್ಲೊ ನಮ್ಮ ಓಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿ ಕಂಡವರಿಗಷ್ಟೇ ತಿಳಿತದಾ ಇದರ ಬೆಲೆಯು

ಸಿಕ್ಕಲ್ಲಿ ಅಲ್ಲ,ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು

ಕಣ್ಣರಳಿದಾಗ ಕಣ್ಣ್ಹೊರಳಿದಾಗ ಹೊಳೆಯುವುದು ಇದರ ಕಲೆಯು

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ
ಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ
ಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ

ಬಂದವರ ಬಳಿಗೆ ಬಂದದಾ… ಮತ್ತು ನಿಂದವರ ನೆರೆಗೂ ಬಂದದೋ… ಬಂದದ
ನವ ಮನು ಬಂದ ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ

ಅಂದದೋ ಅಂದದ, ಅಂದದೋ ಅಂದದ

ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ
ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ

ಅಂದದೋ ಅಂದದ, ಅಂದದೋ ಅಂದದ

VN:F [1.9.22_1171]
Rating: 0.0/5 (0 votes cast)