ಬೇಲಿಯ ಹೂವು

img_0648

ಬೇಲಿಯ ಹೂವು ಏರದು ಮುಡಿಗೆ, ಬಣ್ಣದ ಹೂವದು ಕಾಣದು ಹೊರಗೆ
ನೋಡಿತು ನೋಡುತ ನಲಿಯುತ ಹೇಳಿತು, ಸಂತಸ ಒಳಗಿದೆ ಹೊರಗಿಲ್ಲೆಂದಿತು

ಗಿಡದಲೆ ಮೊಳೆತು, ಗಿಡದಲೆ ಅರಳಿ, ಸಸ್ಯದ ಸಾರವ ಹೀರುವೆ ನಾನು
ಬಾಡುವವರೆಗು ಸೃಷ್ಟಿಯ ಸಾರವ ಅಡೆ-ತಡೆ ಇಲ್ಲದೆ ಸವಿಯುವೆನೆಂದಿತು

ನನ್ನನು ಯಾರು ನೋಡಿದರೇನು?, ಮಾತನಾಡಿಸದೆ ಹೋದರೆ ಏನು?
ಸೂರ್ಯನ ಶಾಖದಿ, ಗಾಳಿಯ ಸ್ಪರ್ಶದಿ, ಮಂಜಿನ ಹನಿಯಲಿ ತೋಯುವೆನೆಂದಿತು

ಚಿಲಿಪಿಲಿಗುಟ್ಟುತ, ಚೀರುತ ಹಾರುವ ಹಕ್ಕಿಯ ಬಳಗವೆ ನನ್ನಯ ಆಪ್ತರು
ಬಳುಕುತ ಬಳಸಿಹ ಬಳ್ಳಿಗಳೆಲ್ಲವು ಮಾತನು ಹರಟುವ ಮಿತ್ರರು ಎಂದಿತು

ಯಾರಿಗು ಕಾಣದೆ ಮರೆಯಲಿ ಬೆಳೆವನು, ಎಂದಿಗು, ಯಾರಿಗು ನೋವನು ಬಯಸೆನು
ನಸು ನಸು ನಗುತಾ, ಎಲ್ಲೋ ಹಾರುವ ದುಂಬಿಯ ಸಂಗವ ಕಾಯುವೆನೆಂದಿತು

ಬೇಡವು ನನಗೆ ದೇವರ ಗುಡಿಯು, ತಾಗದು ನನಗೆ ಮನುಜರ ಮುಡಿಯು
ತನು-ಮನ ನಡೆ-ನುಡಿ ಬೇಲಿಗೆ ಸೀಮಿತ, ಬಯಲಲಿ ಬಾಡದೆ ಸೇರುವೆನೆಂದಿತು

by

ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಒಂದು ಸಣ್ಣ ವಿಷಯವನ್ನು ನನ್ನಿಂದ ನಿರ್ವಹಿಸಲಾಗಲಿಲ್ಲವಲ್ಲ ಎಂದು. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಚಿಂತೆಮಾಡುತ್ತ ಅವರು ಮಾಡುತ್ತಿರುವ ತಪ್ಪುಗಳನ್ನು ತಿದ್ದುವ ವಿಧಾನವನ್ನು ಕಂಡುಹಿಡಿದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ನಡೆದದ್ದು ಹೀಗೆ ! ದೊಡ್ಡಮಗ ತಪ್ಪು ಮಾಡಿದ್ದಾನೆ, ಅವನ ಅಮ್ಮ ಅದನ್ನು ಸರಿಯಿಲ್ಲ ಎಂದು ಪ್ರಶ್ನಿಸಿದ್ದಾಳೆ, ಅವಳು ಪ್ರಶ್ನಿಸಿರುವ ರೀತಿ ಸರಿಯಿಲ್ಲ, ಮಗನ ಮನಸ್ಸಿಗೆ ನೋವಾಗಿದೆ ಅವನು ಹಿಂತಿರುಗಿ ಬಿದ್ದಿದ್ದಾನೆ. ಇಬ್ಬರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲಿಲ್ಲ. ಮಗನಿಗೆ ಸಿಟ್ಟುಬರಲೇಬಾರದು ಎಂದು ಅಮ್ಮ, ಅಮ್ಮ ನನಗೆ ತಾರತಮ್ಯ

by

ಮನೋ-ದೈಹಿಕ ರೋಗಗಳು (Psychosomatic disease) ಮನೋ ದೈಹಿಕ ಎಂದರೆ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದ ದೇಹದಮೇಲೆ ಆಗುವ ಪಪರಿಣಾಮಗಳೆಂದು ಪರಿಗಣಿಸಿದ್ದಾರೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕವಾಗಿ ಆರೊಗ್ಯವಾಗಿರುತ್ತೇವೆ. ಇದು ಈಗಿನ ಮಾತಲ್ಲ!.. ನೂರಾರು ವರ್ಷಗಳ ಹಿಂದೆಯೇ ನಮ್ಮ ರುಷಿ-ಮುನಿಗಳು ಅರಿತಿದ್ದರು. ಇದು ಸುಳ್ಳಲ್ಲ, ನಮ್ಮ ಆಯುರ್ವೇದ ಶಾಸ್ತ್ರವೇ ಇದಕ್ಕೆ ಉದಾಹರಣೆಯಾಗಿದೆ. ಅದು ಹಾಗಿರಲಿ, ಈ ಮನೋ-ದೈಹಿಕ ರೋಗಗಳು ಹೇಗೆ ಬರುತ್ತವೆ ಎಂದು ತಿಳಿಯೋಣ. ಈಗಿನ ಜೀವನ ಶೈಲಿ, ಆಹಾರ, ವಿಹಾರ, ಸಮಾಜ ಮತ್ತು ನಮ್ಮ ತಪ್ಪು ಕಲ್ಪನೆಗಳು