ನಗು ನಗುತಾ ನಲಿ ನಲಿ

ಆ ಹಾ ಹಾ .. ಆ ಹಾ ಹಾ .. ಅ….. ಹಾ

ನಗು ನಗುತಾ ನಲಿ ನಲಿ…
ಎಲ್ಲಾ ದೇವನ ಕಲೆಯೆಂದೇ ನೀ ತಿಳಿ… ಅದರಿಂದಾ ನೀ ಕಲಿ.
ನಗು ನಗುತಾ ನಲಿ ಏನೇ ಆಗಲಿ.

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲೂ ರಸದೌತಣ ನಿನಗೆಲ್ಲೆಲ್ಲ್ಲೂರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ..
ನಗು ನಗುತಾ ನಲಿ ಏನೇ ಆಗಲಿ

ತಾಯೀ ಒಡಲಿನ ಕುಡಿಯಾಗಿ ಜೀವನ! ತಾಯೀ ಒಡಲಿನ ಕುಡಿಯಾಗಿ ಜೀವನ!
ಮೂಡಿ ಬಂದು ಚೇತನ! ತಾಳಲೆಂದು ಅನುದಿನ..
ಅವಳೇದೆ ಅನುರಾಗ ಕುಡಿಯುತ ಬೆಳೆದಾಗ..
ನಗು ನಗುತಾ ನಲಿ ಏನೇ ಆಗಲಿ

ಗೆಳೆಯರ ಜತೆಯಲ್ಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು!
ಗೆಳೆಯರ ಜತೆಯಲ್ಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು
ಮುಂದೆ ಯೌವ್ವನ.. ಮದುವೇ ಬಂಧನ..
ಎಲ್ಲೆಲ್ಲೂ ಹೊಸ ಜೀವನ ಆಹಾ ಎಲ್ಲೆಲ್ಲೂ ಹೊಸ ಜೀವನ..
ಜತೆಯದು ದೊರೆತಾಗ.. ಜತೆಯದು ದೊರೆತಾಗ..
ಮೈಮನ ಮರೆತಾಗ…

ನಗು ನಗುತಾ ನಲಿ ಏನೇ ಆಗಲಿ

ಏರು ಪೇರಿನ ಗತಿಯಲ್ಲಿ ಜೀವನ..ಏರು ಪೇರಿನ ಗತಿಯಲ್ಲಿ ಜೀವನ..
ಸಾಗಿ ಮಾಗಿ ಹಿರಿತನ, ತಂದಿತೈಯ್ಯ ಮುದಿತನ !
ಸಾಗಿ ಮಾಗಿ ಹಿರಿತನ, ತಂದಿತೈಯ್ಯ ಮುದಿತನ
ಅದರೊಳು ಹೊಸದಾದ ರುಚೀಯಿದೆ ಸವಿ ಮೋದ!!
ನಗು ನಗುತಾ ನಲಿ ಏನೇ ಆಗಲಿ….

 

VN:F [1.9.22_1171]
Rating: 3.8/5 (4 votes cast)
ನಗು ನಗುತಾ ನಲಿ ನಲಿ, 3.8 out of 5 based on 4 ratings

Leave a Reply