ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…

ಗೀತ ರಚನೆ : ಚೀ।। ಉದಯಶಂಕರ್
ಹಾಡು : ಡಾ।। ರಾಜ್ ಕುಮಾರ್
ಸಂಗೀತ :

ಹೇ ಹೆ, ಹೆ ಹೆ, ಹೆ ಹೆ ಹೆ ಹೇ , ಹೇ ಹೇ ಹೆ, ಹೆ ಹೆ ಹೇ
ಆ ಹಾ…… ಅಂ ಹಮ್ ಹಂ……

ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…
ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು…

ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…
ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು…

ಆಸೆಎಂಬ ಬಿಸಿಲು ಕುದುರೆ ಏಕೆ ಏರುವೇ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು..
ವಿಷಾದವಾಗಲಿ, ವಿನೋದವಾಗಲಿ ಅದೇನೆ ಆದರು ಅವನೆ ಕಾರಣ.

ಬಾನಿಗೊಂದು ಎಲ್ಲೇ ಎಲ್ಲಿದೆ…

ಹುಟ್ಟು-ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ.

ದುರಾಸೆ ಏತಕೇ.. ನಿರಾಸೆ ಏತಕೇ…
ಅದೇನೆ ಬಂದರೂ…. ಅವನ ಕಾಣಿಕೆ..

ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ…
ಏಕೇ ಕನಸು ಕಾಣುವೇ…. ನಿಧಾನಿಸು ನಿಧಾನಿಸು…
ನಿಧಾನಿಸು ನಿಧಾನಿಸು…

VN:F [1.9.22_1171]
Rating: 5.0/5 (2 votes cast)
ಬಾನಿಗೊಂದು ಎಲ್ಲೇ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಇದೆ..., 5.0 out of 5 based on 2 ratings

Leave a Reply