ದೀಪದ ಹಾವಳಿ ಈ ದೀಪಾವಳಿ

deepa

ದೀಪಗಳ ಹಾವಳಿ ಈ ದೀಪಾವಳಿ,
ಮನೆ ಮನೆಯಲ್ಲೂ ಬಣ್ಣದ ರಂಗೋಲಿ,
ಮನ ಮನಗಳಲ್ಲೂ ಬೀಸುವ ತಂಗಾಳಿ,
ಎಲ್ಲರ ಬದುಕಲ್ಲೂ…ಹೊತ್ತು ತರಲಿ ಪ್ರೀತಿಯ ಈ ಬೆಳಕಿನ ದೀಪಾವಳಿ…

ಬೆಳಗುವ ದೀಪವು ಸುಡಲಿ ದ್ವೇಶವ,
ಕರಗಲಿ ಜಾತಿ-ಮತಗಳ ಭಾವ,
ಎಲ್ಲರೂ ಹೊಸೆಯಲಿ ಒಲವಿನ ದಾರವ,
ಇಂದೇ ಹುಟ್ಟಲಿ ಶಾಂತಿಯ ಮಾನವ

ಎಲ್ಲರ ಮನೆಯಲ್ಲೂ ಬೆಳಗಲಿ ಶಾಂತಿಯ ನೀತಿ,
ಎಲ್ಲರ ಮನದಲ್ಲೂ ಹುಟ್ಟಲಿ ನೀತಿಯ ಪ್ರೀತಿ,
ಪ್ರತಿದಿನ ವಾತಾವರಣವಿರಲಿ ಹಬ್ಬದ ರೀತಿ,
ಎಲ್ಲರ ಬಾಳಲಿ ಬೆಳಗಲಿ ಈ ಬೆಳಕಿನ ಆರತಿ….ಈ ಬೆಳಕಿನ ಆರತಿ….

– ಶಮಂತ್

VN:F [1.9.22_1171]
Rating: 3.8/5 (4 votes cast)
ದೀಪದ ಹಾವಳಿ ಈ ದೀಪಾವಳಿ, 3.8 out of 5 based on 4 ratings

Leave a Reply