ಬಯಲ ಹಿಂದಿನ ಚಿಂತನೆ

ಈ ಅಂತರ್ಜಾಲ ತಾಣವನ್ನು ಕಟ್ಟಲು ನಾನು ಆರಂಭಿಸಿರುವುದು ಕನ್ನಡ ಸಾಹಿತ್ಯವನ್ನು ಪ್ರೀತಿಸುವವರಿಗಾಗಿ, ಒಂದು ಮಾಹಿತಿಯ ನೆಲೆಯಾಗಿ, ಒಂದು ಜ್ಞಾನದ ಹೆಬ್ಬಾಗಿಲಾಗಿ ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ದೊರಕುವಂತೆ ಬೆಳೆಸಬೇಕೆಂಬ ಕನಸಿನಿಂದ. ಇಲ್ಲಿನ ಬರಹಗಳು ನನ್ನ ನಿಮ್ಮಂತಹ ಜನರಿಂದ ಕೊಡಲ್ಪಡುತ್ತದೆ ಮತ್ತು ಸಾಮನ್ಯವಾದ ಸರಳ ಭಾಷೆಯಲ್ಲಿರುತ್ತದೆ.

ನಾನು ಈ ಅಂತರ್ಜಾಲ ತಾಣವನ್ನು, ಯಾರು ತನ್ನ ಸಂಪರ್ಕಕ್ಕೆ ಬಂದ ಎಲ್ಲರೊಡನೆ ಬದುಕಿನ ಆದರ್ಶವನ್ನು / ಮೌಲ್ಯಗಳನ್ನು / ಜ್ಞಾನವನ್ನು ಹಂಚಿಕೊಂಡ ದಿವ್ಯ ಚೇತನಕ್ಕೆ, ಸಮರ್ಪಿಸುತ್ತಿದ್ದೇನೆ.

ಬಯಲು’ ಎಂಬ ಕನ್ನಡ ಪದ ವಿಶಾಲವಾದ ತೆರೆದಜಾಗ, ಸಮತಟ್ಟನೆಲ ಮತ್ತು ಬಯಲು ಎಂದು. ಇದು ತೆರೆದ ಮನಸ್ಸನ್ನು, ಉನ್ನತ ದೃಷ್ಠಿಯನ್ನು, ಕಣ್ಣಿಗೂ ಮನಸ್ಸಿಗೂ ಸಿಗುವ ಎಲ್ಲ ಚೆಲುವನ್ನು, ಪ್ರಕಾಶವನ್ನು, ವಿಶಿಷ್ಠತೆಯನ್ನೂ, ಒಂದು ಶೂನ್ಯವನ್ನು, ಅದೃಶ್ಯವನ್ನು, ಅನಂತವು ಬೆಳಕಿಗೆ ಬರುವುದನ್ನೂ ಸಹ ಹೇಳುತ್ತದೆ.


ಹೆಚ್ಹಿನ ಜನರು ತಮ್ಮ ಮುಗ್ದತೆ ಅಜ್ಞಾನ ಮತ್ತು ಮೂಢ ನಂಬಿಕೆ ಇತ್ಯದಿಗಳಿಂದ ಪ್ರಭಾವಿತರಾಗಿದ್ದಾರೆ. ಆ ಕಾರಣದಿಂದಲೇ ಶೋಷಣೆಗೆ, ಹಿಂಸೆಗೊಳಗಾಗಿ, ತಪ್ಪಾಗಿ ನಡೆಸಿಕೊಳ್ಳಲ್ಪಡುತ್ತಿದ್ದಾರೆ. ಅಂತಹ ಜನರನ್ನು ಈ ಅಂತರ್ಜಾಲ ತಾಣದ ಮೂಲಕ ಮುಟ್ಟುವ ಮತ್ತು ಇಲ್ಲಿರುವ ಬರಹಗಳ ಮೂಲಕ ಸಹಾಯ ಮಾಡುವ ಒಂದು ಸಣ್ಣ ಪ್ರಯತ್ನ.

ನಿಮ್ಮ ಸಲಹೆ, ತಿಳಿವಳಿಕೆ, ದೃಷ್ಠಿಕೋನ ಮತ್ತು ಟೀಕೆಗಳು ಈ ದಿಕ್ಕಿನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ.

 

VN:F [1.9.22_1171]
Rating: 5.0/5 (7 votes cast)
ಬಯಲ ಹಿಂದಿನ ಚಿಂತನೆ, 5.0 out of 5 based on 7 ratings

1 Comment


  1. // Reply

    ತುಂಬಾ ಒಳ್ಳೆಯ ಪರಿಕಲ್ಪನೆ.

Leave a Reply