ಯಾರಿಗಾಗಿ?

ಈ ಬರಹಗಳು ಎಲ್ಲರಿಗೂ ಸರಿ ಹೊಂದುತ್ತದೆ ಎಂದು ತಿಳಿದಿದ್ದೇನೆ. ಈಗಿನ ಯುವ ಪೀಳಿಗೆಗೆ, ಕಾಲೇಜು ಹುಡುಗ-ಹುಡುಗಿಯರಿಗೆ, ಸಾಹಿತ್ಯ ಪ್ರಿಯರಿಗೆ, ಜನಪದ ಇಷ್ಟ ಪಡುವವರಿಗೆ, ವಿಮರ್ಶಕರಿಗೆ, ಚುಟುಕು ಕವನಗಳನ್ನು ಕಟ್ಟುವವರಿಗೆ, ತಮ್ಮ ಬರಹಗಳನ್ನು ಪ್ರಪಂಚಕ್ಕೆ ಮುಕ್ತವಾಗಿ ತೋರುವರಿಗೆ, ಗ್ರಾಮೀಣ ಜನರಿಗೆ, ರೈತರಿಗೆ, ತರ್ಕಬದ್ಧ ವಿಚಾರಗಳನ್ನು ಇಷ್ಟ ಪಡುವವರನ್ನು ಹೀಗೆ ಹಲವರನ್ನು ಈ ಮೂಲಕ ಮುಟ್ಟುವ ಪ್ರಯತ್ನ. ಎಲ್ಲರೂ ತಮ್ಮದೇ ಆದ ಪರಿಸರದಲ್ಲಿ ಬೆಳೆದಿರುತ್ತಾರೆ. ಅವರ ಯೋಚನೆ, ಅನುಭವ, ಗೆಳೆತನ, ವಿಧ್ಯಾಭ್ಯಾಸ, ನೋವು-ನಲಿವು, ಆಚಾರ-ವಿಚಾರ ಎಲ್ಲವೂ ಭಿನ್ನವಾಗಿರುತ್ತವೆ. ಜೀವನಾನುಭವ ಭಿನ್ನವಾಗಿದ್ದರೂ ನಾವುಗಳು ಜೊತೆಯಲ್ಲಿಯೇ ಬೆಳೆಯುತ್ತೇವೆ. ನಮ್ಮಲ್ಲಿನ ವೆತ್ಯಾಸಗಳನ್ನು ಅರಿತು ಅನೇಕತೆಯಲ್ಲೇ ಏಕತೆಯನ್ನು ಕಾಣೋಣ. ಜಾತಿ, ಮತ, ಲಿಂಗ, ಮೇಲು, ಕೀಳು, ಬಡವ, ಶ್ರೀಮಂತ, ಉಚ್ಚ, ನೀಚ ಇವೆಲ್ಲವನ್ನು ಮರೆತು ನಮ್ಮನ್ನು ಮನುಷ್ಯರೆಂದು ಗುರುತಿಸಿಕೊಳ್ಳೋಣ. ಇದನ್ನೆಲ್ಲ ಅರಿತು ಅರ್ಥಮಾಡಿಕೊಂಡು ಬಯಲನ್ನು ಕಟ್ಟುವ ನಿಮ್ಮೆಲ್ಲರಿಗಾಗಿ ಈ ತಾಣ

VN:F [1.9.22_1171]
Rating: 5.0/5 (1 vote cast)
ಯಾರಿಗಾಗಿ?, 5.0 out of 5 based on 1 rating

1 Comment


  1. // Reply

    ಅನಂತ ವಿಶ್ವದಲ್ಲಿ ನಮಗೆ ತಿಳಿದಿರುವ ಜ್ಞಾನ ಸೂಜಿ ಮೊನೆಯಷ್ಟು ಮಾತ್ರಾ. ಅದನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವವರಿಗೆ ನಿಮ್ಮ ಮಾರ್ಗದರ್ಶನ ಚೆನ್ನಾಗಿದೆ. ಅಭಿನಂದನೆಗಳು.
    ಲಿಂಗರಾಜು ಡಿ.ಎಸ್.

Leave a Reply