ಕನ್ನಡದವರಿಗೆ (ವಿಶಾಲ) ಹೃದಯ!!

ಇದು ನನ್ನ ಎರಡನೇ ಅನುಭವ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದೆ, ಬಸ್ನಲ್ಲಿ ಕೂತಾಗ ಇಂಪಾದ ಕನ್ನಡ ಭಾವಗೀತೆ ಬರುತ್ತಿತು. ರೇಡಿಯೋ ಸ್ವಲ್ಪ ಜೋರಾಗಿದ್ದಿರಬಹುದು, ಆದರೆ ಹಾಡುಗಳು ಮಧುರವಾಗಿದ್ದವು. ನಿಮಗೆ ಗೊತ್ತಿರುವಹಾಗೆ ಮೈಸೂರಿಗೆ ಬರುವ ಜನರಲ್ಲಿ ಬಹಳಷ್ಟು ಕನ್ನಡೇತರ ಮಂದಿ ಬರುತ್ತಾರೆ. ಕನ್ನಡ ಗೊತ್ತಿಲ್ಲದ ಜನರಿಗೆ, ಈ ಹಾಡುಗಳು ಏನನ್ನು ಹೇಳಿಯಾವು? ಸಹಜವಾಗಿ ಅವರಿಗೆ ಬೇಜಾರು.. ಸರಿ ನಾನು ಡ್ರೈವರ್ ಹತ್ತಿರ ಹೋಗಿ, ಸ್ವಲ್ಪ ಸೌಂಡ್ ಕಡಿಮೆ ಮಾಡಿ ಎಂದೇ. ಪಾಪ ಅವನು ಜನರ ಮನ್ನಣೆಗೆಬೆಲೆ ಕೂಟ್ಟು ಸೌಂಡ್ ಕಡಿಮೆ ಮಾಡಿದ. ನಿಧಾನವಾಗಿ ನನ್ನ ಸೀಟ್ನಲ್ಲಿ ಬಂದು ಕುಳಿತೆ. ಹಿಂದಿನ ಸೀಟಿನಲ್ಲಿ, ನಮ್ಮ ಕ್ಷೇತ್ರದ (Software Professional) ವ್ಯಕ್ತಿ, ಹಿಂದಿಯನ್ನು ಮಾತ್ರ ಮಾತಾಡಬಲ್ಲ IT ತರುಣನಿಗೆ ಬೇಸರವಾಗಿ ತನ್ನ ಮೊಬೈಲ್ ನಲ್ಲಿ ಇಂಗ್ಲಿಷ್ ಹಾಡುಗಳನ್ನು ಹಾಕಿದ. ತಲೆಯ ಮೇಲೆ ಕನ್ನಡ ಹಾಡುಗಳು, ಬೆನ್ನ ಹಿಂದೆ ಅಸ್ಪಷ್ಟ ಇಂಗ್ಲಿಷ್ ಹಾಡುಗಳು. ನಾನು ನೋಡಿ, ತರುಣನಿಗೆ ಸ್ವಲ್ಪ ಸೌಂಡ್ ಕಡಿಮೆ ಮಾಡಪ್ಪ ಎಂದೇ. ಅವನು ಸರಿ…. ಕಡಿಮೆ ಮಾಡುತ್ತೇನೆ ಆದರೆ, ‘ನಾನು ಹಾಕಿದ ಹಾಡುಗಳು better than that’ ಅಂದ. ಪಾಪ ಅವನಿಗೆ ಅರ್ಥವಾಗದ ಹಾಡುಗಳನ್ನು ಕೇಳಲು ಅವನಿಗೂ ಕಷ್ಟ! ಆದರೆ ಅವನು ಕನ್ನಡ ಹಾಡುಗಳನ್ನು ಕೇಳದೇ… this is better than that ಎಂದು ಹೇಗೆ ಹೇಳಿದ ಎಂದು ನನಗೂ ಕಷ್ಟ. ನಮ್ಮ ಬಹು ಭಾಷಿಯ ಕನ್ನಡ ರಾಜ್ಯದಲ್ಲಿ ಈ ರೀತಿಯ ಗೊಂದಲ ಎಲ್ಲಿಂದ-ಎಲ್ಲಿಗೆ ಕರೆದೊಯ್ಯುತ್ತದೋ ದೇವರೇ ಬಲ್ಲ. ಹೌದಲ್ಲವೇ ಈ ರೀತಿಯ ಸೂಕ್ಷ್ಮ ವಿಷಯಗಳು ಕನ್ನಡಿಗರನ್ನು ಮತ್ತಷ್ಟು ಪ್ರಭುದ್ದರನ್ನಾಗಿ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ನಾವುಗಳು ಹೇಗೆ ವರ್ತಿಸಬೇಕು? ಸುಮ್ಮನಿರಲು ಭಾಷಾಭಿಮಾನ ಬಿಡುವುದಿಲ್ಲ,.. ಸುಮ್ಮನಿಲ್ಲದ್ದಿದ್ದರೆ ದೊಡ್ಡ ಹೋರಾಟವೇ ನಡೆದು ಬಿಡುತ್ತದೆ. ಕನ್ನಡ ಮತ್ತು ಕರ್ನಾಟಕದ ಹೆಸರಿನಲ್ಲಿ ಗುಂಪು ಕಟ್ಟಿ ‘ಮಹಾ ಭಾರತವೇ’ ನಡೆದೀತು. ಆದರೂ ಕನ್ನಡದವರಿಗೆ (ವಿಶಾಲ) ಹೃದಯ!!

VN:F [1.9.22_1171]
Rating: 2.5/5 (4 votes cast)
ಕನ್ನಡದವರಿಗೆ (ವಿಶಾಲ) ಹೃದಯ!!, 2.5 out of 5 based on 4 ratings

Leave a Reply