ನಾವು ಸುಳ್ಳೇಕೆ ಹೇಳುತ್ತೇವೆ?

ಭಯ / ಹೆದರಿಕೆ

  • ನಾವು ಭಯದಲ್ಲಿ ಅಥವಾ ಹೆದರಿಕೆಯಿಂದ ಇದ್ದಾಗ ಸಾಮಾನವಾಗಿ ಸುಳ್ಳು ಹೇಳುತ್ತೇವೆ.
  • ನಮಗೆ ಏನು ತಿಳಿಯದ ಭಯ.
  • ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೋ (ತಿಳಿಯುತ್ತಾರೋ) ಎಂಬ ಭಯ.
  • ನಮ್ಮ ಬಗ್ಗೆ ಬೇರೆಯವರು ಏನು ಕಂಡುಹಿಡಿಯುತ್ತಾರೋ ಎಂಬ ಭಯ.
  • ಪ್ರತಿಸಲ ನಾವು ಸುಳ್ಳುಹೇಳಿದಾಗ ನಮ್ಮ ಭಯ ಜಾಸ್ತಿಯಾಗುತ್ತಿರುತ್ತದೆ. ಇಲ್ಲದ್ದನ್ನು ಊಹೆಮಾಡಿಕೊಳ್ಳುತ್ತಾ, ಯಾವುದು ಮುಂದೆ ಆಗುತ್ತದೆ ಎಂದು ಈಗಲೇ ಊಹೆಮಾಡಿಕೊಳ್ಳುತ್ತಾ ಭಯಪಡುತ್ತಾ ಸುಳ್ಳುಹೇಳುತ್ತಿರುತ್ತಾರೆ.
  • ಕೆಲವೊಮ್ಮೆತಪ್ಪು ಮಾಡಿ ಅದನ್ನು ಮುಚ್ಚಲು ಸುಳ್ಳು ಹೇಳುತ್ತಿರುತ್ತಾರೆ.
  • ತಪ್ಪುಮಾಡಿದ್ದಕ್ಕಿಂತ ತಪ್ಪುಮಾಡಿಲ್ಲವೆಂದು ಸುಳ್ಳುಹೇಳುವುದು ಮಹಾ ಅಪರಾಧ.

ಹೆಮ್ಮೆ

ಕೆಲವೊಮ್ಮೆ ಬೇರೆಯವರು ನಾವು ಹೇಳಿದಂತೆ ಮಾಡಿಸಲು/ನಡಸಲು ಅಥವಾ ನಮಗೆ ಬೇಡವಾದದ್ದನು (ಇಷ್ಟಇಲ್ಲದ್ದನ್ನು) ಬೇರೆಯವರು ಮಾಡಬಾರದಿದ್ದಾಗ ಸುಳ್ಳುಹೇಳಿ ನಮಗೆ ಹೇಗೆ ಬೇಕೋ ಹಾಗೆ ನಡೆಸಿಕೊಳ್ಳಲು ಸುಳ್ಳು ಹೇಳುತ್ತೇವೆ.  ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾ ತಮ್ಮ ಗುಣಗಳು ಬಹಳ ಪ್ರಶಂಸನಾರ್ಹ ಎಂದು ತೋರಿಸಿಕೊಳ್ಳಲು ಸುಳ್ಳು ಹೇಳುತ್ತಾರೆ.  ಇದು ಉತ್ಪ್ರೇಕ್ಷೆಯಾಗಿರುತ್ತದೆ ಮತ್ತು ಉತ್ಪ್ರೇಕ್ಷೆಯ ಮಾತುಗಳು ಸದಾ ಸುಳ್ಳಿನದ್ದಾಗಿರುತ್ತದೆ.
ಸುಳ್ಳು ಘನತೆ

ಮನುಷ್ಯ ತಾನು ಯಾರಿಗಿಂತ ಕಡಿಮೆಇಲ್ಲ, ತನಗೆ ಗೊತ್ತಿಲ್ಲದ ವಿಚಾರವನ್ನು ತಿಳಿದಿಲ್ಲ ಎಂದರೆ ಬೇರೆಯವರು ತಮ್ಮನ್ನು ಕೀಳಾಗಿ ನೋಡಬಹುದು ಎಂಬ ದೃಷ್ಟಿಯಲ್ಲಿ ಹಲವಾರುಜನ ಸುಳ್ಳನ್ನು ಹೇಳುತ್ತಾರೆ.  ಸುಳ್ಳು ಘನತೆಯಲ್ಲಿ ಬರುವ ಅಥವಾ ಆಡುವ ಸುಳ್ಳು ಎಲ್ಲವನ್ನೂ ಎಲ್ಲರನ್ನೂ ಹಾಳುಮಾಡಿಬಿಡುತ್ತದೆ.  ಇದು ಬಹಳ ಭಯಂಕರ ರೋಗ.

ಒಟ್ಟಿನಲ್ಲಿ ನಿಜ ಏನೆಂದರೆ, ನಾವು ಬೇರೆಯವರಿಗೆ ಸುಳ್ಳುಹೇಳಿ ಮೋಸ ಮಾಡುವುದು ಸುಲಭ ಮತ್ತು ಅದರಿಂದ ನಮಗೆ ಅನುಕೂಲವಾಗುತ್ತದೆ ಮತ್ತು ನಮ್ಮ ಸ್ವಾರ್ಥ ಸಾಧನೆಯಾಗುತ್ತದೆ.  ಆದ್ದರಿಂದ ನಾವು ಸುಳ್ಳು ಹೇಳುತ್ತೇವೆ.

VN:F [1.9.22_1171]
Rating: 3.7/5 (3 votes cast)
ನಾವು ಸುಳ್ಳೇಕೆ ಹೇಳುತ್ತೇವೆ?, 3.7 out of 5 based on 3 ratings