ಎಂಥ ಮರುಳಯ್ಯ ಇದು ಎಂಥ ಮರುಳು

ಎಂಥ ಮರುಳಯ್ಯ ಇದು ಎಂಥ ಮರುಳು
ಬೆಳಗಿನ ಹಿಮದಂತೆ ಹರಿವ ನೆರಳು
ಥಳ ಥಳ ಮಿನುಗಿ ಸೋಕಲು ಕರಗಿ
ಥಳ ಥಳ ಮಿನುಗಿ ಸೋಕಲು ಕರಗಿ
ಹರಿವುದು ಈಬಾಳಿನೆಲ್ಲಾ ತಿರುಳು
ಹರಿವುದು ಈಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯ ಇದು ಎಂಥ ಮರುಳು

ಹರಿವುಯ ನೀರಿಗೆ ಯಾವ ಹೊಣೆ ?
ಹಾರುವ ಹಕ್ಕಿಗೆ ಎಲ್ಲಿ ಮನೆ ?
ಹರಿವುಯ ನೀರಿಗೆ ಯಾವ ಹೊಣೆ ?
ಹಾರುವ ಹಕ್ಕಿಗೆ ಎಲ್ಲಿ ಮನೆ ?
ಬಾಳಿನ ಕಡಲಿನ ತೆರಿಗಳ ಸೀಳಿ
ತಲಪುವುದಾಚೆಯ ದಡದಾ ಕೊನೆ
ತಲಪುವುದಾಚೆಯ ದಡದಾ ಕೊನೆ
ಎಂಥ ಮರುಳಯ್ಯ ಇದು ಎಂಥ ಮರುಳು

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ, ಕಡಲಿಗೆ ಸಾಲಾಗಿ
ಮೂಡುತ ಮುಳುಗುತ್ತ
ಬೆನ್ನಟ್ಟಿ ಸಾಗುವ ತೆರೆಗಳ ಹಾಡೇ
ಶೃಷ್ಠಿಯ ಸುಂದರ ಸುಳ್ಳಿನ ಮಾಲೆ
ಶೃಷ್ಠಿಯ ಸುಂದರ ಸುಳ್ಳಿನ ಮಾಲೆ

ಎಂಥ ಮರುಳಯ್ಯ ಇದು ಎಂಥ ಮರುಳು
ಬೆಳಗಿನ ಹಿಮದಂತೆ ಹರಿವ ನೆರಳು
ಥಳ ಥಳ ಮಿನುಗಿ ಸೋಕಲು ಕರಗಿ
ಥಳ ಥಳ ಮಿನುಗಿ ಸೋಕಲು ಕರಗಿ
ಹರಿವುದು ಈಬಾಳಿನೆಲ್ಲಾ ತಿರುಳು
ಹರಿವುದು ಈಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯ ಇದು ಎಂಥ ಮರುಳು

VN:F [1.9.22_1171]
Rating: 5.0/5 (3 votes cast)
ಎಂಥ ಮರುಳಯ್ಯ ಇದು ಎಂಥ ಮರುಳು, 5.0 out of 5 based on 3 ratings