ಪಟ್ಟ ಕಟ್ಟ ಬೇಡಿ

mulees

ಅತ್ತ ಪುಲಿ ಇತ್ತ ದರಿ ಎಂಬುದೇ ಭ್ರಮೆ.
ಹುಟ್ಟಲಾರದ ಅಪೇಕ್ಷೆಯ ಅರಿವಿನ
ಅಸಂಗಥದ ವಾಸ್ತವಕ್ಕೆ
ಏನೇನೂ ಅಳುಕಿನ, ಅಸಯ್ಯದ ಹೇಲು ಸಾರಿಸಿ,
ಅಲ್ಲೇ ಮೃಷ್ಟಾನ್ನ ಭೋಜನ
ಅಪಥ್ಯವಾದ ಮಿಥ್ಯಗಳ
ಬೊಜ್ಜು ಹೊಟ್ಟೆ ಪ್ರಪಂಚಕ್ಕೆ ಸುಖದ ಸಂಕೇತ.
ದ್ವಂದ್ವಗಳ ತಿಕ್ಕಾಟದ ಮನಸ್ಸು, ಅವರಿಗೆ
ಹರೆಯದ ಕಾಮ ತೀಟೆ; ಇನ್ನು ‘ಸತ್ಯ’
ಸನ್ಯಾಸಿಯ ಪದವಂತೆ! ಅದರ ಹೊನಲಿನ
ಹುಡುಕಾಟದ ಯತ್ನಕ್ಕೆ ಕರ್ಕಶವಾದ ನಗುವಿನ ಕೇಕೆ;
ನಿಂತಿರುವುದು ಕಕ್ಕದಲ್ಲಾದರೇನು;

ನಾನೋ ಹಾತೊರೆವ ಸ್ವಾತಂತ್ರಕ್ಕೆ
ಹಾದರದ ಬೆಲೆ ಕಟ್ಟಲಾರೆ.
ಆತುರಕ್ಕೆ ಕರೆದಾಕೆ ಕೊಟ್ಟ ತೃಪ್ತಿ ಕ್ಷಣಿಕ ನನಗೆ;
ಆಕೆ ಪಡೆದದ್ದು ಬಯಕೆಯ ಕಾಸು.
ಕೊಟ್ಟ ತೃಪ್ತಿಯ ಆದರಿಸದಿದ್ದುದು ನನ್ನ ಕೊಳಕೋ?
ಕಾಣಿಕೆಯದಾಚೆಗಿನ ಬಯಕೆ ಬಯಸಲಾರದ್ದು ಅವಳ ಉಳುಕೋ?
ಬಯಸೂ ಬೇಸತ್ತಳೋ ಇವರ ತೀಟೆಗೆ ಬೆಸ್ತುಬೀಳಿಸಿದರೋ
“ಸೂಳೆ” ಎಂಬ ಪಟ್ಟಾಭಿಷೇಕ;

ಪಟ್ಟ,ಪಟ್ಟಾಂಗ ಎಲ್ಲಾ ಇವರದ್ದೇ.
ಸೂಳೆ ಕೊಟ್ಟ ತ್ರುಪ್ತಿಯೂ ಸತ್ಯ
ಇವರ ಸತ್ಯಕ್ಕೆ ಅಧ್ಯಾತ್ಮದ ಬೇಲಿ.
ಅದರಾಚೆಗಿನ ಬೃಂದಾವನ ಬಯಸದ
ಇವರಿಗೆ ‘ನಾಮ-ಪದವಿಲ್ಲ’.
ನಾನೂ ಇಡಾನ್ ಗಿಲ್ಲ,
ಹೆಣ್ಣು ಕೊಡ್ತಾರಂತ ನಂಗ
ಶಂಡನಿಗೂ ರಂಡೆಯಲ್ಲದವಳನ್ನ;
ಗರತಿ ಗುರುತಿಸಲಾರಳಲ್ಲ!!
ಮಿಂಡಗಳ ಕಂಡಾಕೆಯ ಮುಂದೆ ಸತ್ಯ ಕತ್ತಲಲ್ಲೂ ನಗ್ನ!!!

ಹುಚ್ಚೆದ್ದ ಮೆದುಳಿನ ಅಪ್ರಾಪ್ತಕ್ಕೆ ಹುಟ್ಟಿದ
ಮಡಿವಂತಿಕೆ ಇಲ್ಲದ ಮಾಂಸದ ಮುದ್ದೆ ಇದು.
ರೂಪ ಕೊಡಲಾರೆ ಹೆಸರೂ ಇಡಲಾರೆ
ಸತ್ಯದ ರೂಪಾನ್ತರವಿಲ್ಲದ ಅನುರೂಪವಾಗದೇನು?
ಹೆಸರ ಹಂಗಿಲ್ಲದೆ ಹಾರಡದೇನು?
ಜೀವ ಸೃಷ್ಟಿಯ ಹೋರಾಟದಲ್ಲಿ ಹುಟ್ಟಿದ
ಚೇತನವಿದು; ಕ್ರಿಯೆ , ಕ್ರಿಯಾಶೀಲರ
ಕಾರ್ಯ ಕೆದುಕಬೇಕೇನು? ಹುಟ್ಟಿಗೆ ಬೆಲೆ ಇಲ್ಲೇನು ?
ಬೆಲೆ ಇದೆ ಎಂದು ಒಪ್ಪಿದ ಮೇಲೆ
ಪಟ್ಟ ಕಟ್ಟ ಬೇಡಿ ಪಟ್ಟಿ ಕಟ್ಕಂಡು ನೋಡಬೇಡಿ.

ಗಿರೀಶ ಏನ್. ಆರ್

VN:F [1.9.22_1171]
Rating: 4.0/5 (2 votes cast)
ಪಟ್ಟ ಕಟ್ಟ ಬೇಡಿ, 4.0 out of 5 based on 2 ratings

Leave a Reply